KEA Recruitment 2026 Update:ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ 2026 ನೇ ಸಾಲಿನ ಪರಿಷ್ಕೃತ ಅಧಿಸೂಚನೆ ಬಿಡುಗಡೆಯಾಗಿದೆ. ಈ ನೇಮಕಾತಿಯಲ್ಲಿ ಬೆಂಗಳೂರು ನಗರ ನೀರು ಸರಬರಾಜು ಒಳಚರಂಡಿ ಮಂಡಳಿ (BWSSB), ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (KSSIDC) ಹಾಗೂ ಕೃಷಿ ಮಾರಾಟ ಇಲಾಖೆಯ ವಿವಿಧ ಸಹಾಯಕ ಅಭಿಯಂತರ (AE) ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಿವಿಲ್, ಮೆಕ್ಯಾನಿಕಲ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಅಭ್ಯರ್ಥಿಗಳಿಗೆ ಇದು ಉತ್ತಮ ಸರ್ಕಾರಿ ಉದ್ಯೋಗ ಅವಕಾಶವಾಗಿದೆ. RPC ಹಾಗೂ ಕಲ್ಯಾಣ ಕರ್ನಾಟಕ (HK Region) ಮೀಸಲಾತಿಯಡಿ ಹಲವು ಹುದ್ದೆಗಳು ಲಭ್ಯವಿವೆ.
Table of Contents
ಹುದ್ದೆಗಳ ವಿವರ
BWSSB ಹುದ್ದೆಗಳು
| ಹುದ್ದೆ | ಹುದ್ದೆಗಳ ಸಂಖ್ಯೆ |
|---|---|
| ಸಹಾಯಕ ಅಭಿಯಂತರ (ಸಿವಿಲ್) – Group B | 13 (RPC) + 05 (HK) = 18 |
| ಸಹಾಯಕ ಅಭಿಯಂತರ (ಮೆಕ್ಯಾನಿಕಲ್) – Group B | 02 (RPC) + 01 (HK) = 03 |
| ಸಹಾಯಕ ಅಭಿಯಂತರ (ಕಂಪ್ಯೂಟರ್ ಸೈನ್ಸ್) – Group B | 01 |
KSSIDC ಹುದ್ದೆಗಳು
| ಹುದ್ದೆ | ಹುದ್ದೆಗಳ ಸಂಖ್ಯೆ |
|---|---|
| ಸಹಾಯಕ ಕಾರ್ಯಪಾಲಕ ಅಭಿಯಂತರ (ಸಿವಿಲ್) – Group A | 01 |
| ಸಹಾಯಕ ಅಭಿಯಂತರ (ಸಿವಿಲ್) – Group B | 03 (RPC) + 01 (HK) = 04 |
ಕೃಷಿ ಮಾರಾಟ ಇಲಾಖೆ ಹುದ್ದೆಗಳು
| ಹುದ್ದೆ | ಹುದ್ದೆಗಳ ಸಂಖ್ಯೆ |
|---|---|
| ಸಹಾಯಕ ಅಭಿಯಂತರ (ಸಿವಿಲ್) – Group B | 10 |
ವೇತನ ವಿವರ
BWSSB ನಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ₹53,250 ರಿಂದ ₹1,15,460 ವರೆಗೆ ವೇತನ ನೀಡಲಾಗುತ್ತದೆ.
KSSIDC ಯಲ್ಲಿ Assistant Executive Engineer ಹುದ್ದೆಗೆ ₹83,700 ರಿಂದ ₹1,55,200 ವರೆಗೆ ಹಾಗೂ Assistant Engineer ಹುದ್ದೆಗೆ ₹69,250 ರಿಂದ ₹1,34,200 ವರೆಗೆ ಸಂಬಳ ದೊರೆಯುತ್ತದೆ.
ಕೃಷಿ ಮಾರಾಟ ಇಲಾಖೆಯ Assistant Engineer ಹುದ್ದೆಗೆ ₹69,250 ರಿಂದ ₹1,34,200 ವರೆಗೆ ವೇತನ ಹಾಗೂ ಸರ್ಕಾರಿ ಸೌಲಭ್ಯಗಳು ಲಭ್ಯವಿರುತ್ತವೆ.
ಶೈಕ್ಷಣಿಕ ಅರ್ಹತೆ
BWSSB ಎಲ್ಲಾ ಹುದ್ದೆಗಳು
- ಸಂಬಂಧಿತ ವಿಭಾಗದಲ್ಲಿ Engineering Degree
- ಕನಿಷ್ಠ 6 ತಿಂಗಳ Computer Basics Course ಕಡ್ಡಾಯ
KSSIDC / ಕೃಷಿ ಮಾರಾಟ ಇಲಾಖೆ
- ಮಾನ್ಯ ವಿಶ್ವವಿದ್ಯಾಲಯದಿಂದ BE/BTech (Civil)
KSSIDC AEE ಹುದ್ದೆ
- BE/BTech (Civil)
- 3 ವರ್ಷಗಳ ಸೇವಾನುಭವ ಅಗತ್ಯ
ವಯೋಮಿತಿ
| ವರ್ಗ | ಗರಿಷ್ಠ ವಯಸ್ಸು |
|---|---|
| GM | 40 ವರ್ಷ |
| 2A / 2B / 3A / 3B | 43 ವರ್ಷ |
| SC / ST / ಪ್ರವರ್ಗ-1 | 45 ವರ್ಷ |
| ವಿಶೇಷ ಚೇತನ / ವಿಧವೆ | +10 ವರ್ಷ |
| ಮಾಜಿ ಸೈನಿಕ | ಸೇವಾ ವರ್ಷ + 3 ವರ್ಷ |
| ಸರ್ಕಾರಿ / ನಿಗಮ ನೌಕರ | ಸೇವಾ ವರ್ಷ ಅಥವಾ 10 ವರ್ಷ |
ಅರ್ಜಿ ಶುಲ್ಕ
| ವರ್ಗ | ಶುಲ್ಕ |
|---|---|
| GM / 2A / 2B / 3A / 3B | ₹750 |
| SC / ST / ಪ್ರವರ್ಗ-1 / ಮಾಜಿ ಸೈನಿಕ / ತೃತೀಯ ಲಿಂಗ | ₹500 |
| ವಿಶೇಷ ಚೇತನ ಅಭ್ಯರ್ಥಿಗಳು | ₹250 |
| ಹೆಚ್ಚುವರಿ ಹುದ್ದೆ | ₹100 ಪ್ರತಿ ಹುದ್ದೆಗೆ |
ಸೂಚನೆ: 2025ರ ಅಕ್ಟೋಬರ್/ನವೆಂಬರ್ ಅಧಿಸೂಚನೆಯಲ್ಲಿ ಈಗಾಗಲೇ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಮತ್ತೆ ಶುಲ್ಕ ಪಾವತಿಸುವ ಅಗತ್ಯವಿಲ್ಲ.
ಪ್ರಮುಖ ದಿನಾಂಕಗಳು
| ವಿವರ | ದಿನಾಂಕ |
|---|---|
| ಅರ್ಜಿ ಪ್ರಾರಂಭ | 21.05.2026 |
| ಅರ್ಜಿ ಕೊನೆಯ ದಿನ | 04.06.2026 |
| ಶುಲ್ಕ ಪಾವತಿ ಕೊನೆಯ ದಿನ | 05.06.2026 ಸಂಜೆ 4 ಗಂಟೆ |
| ಪರೀಕ್ಷಾ ದಿನಾಂಕ | ನಂತರ ಪ್ರಕಟಿಸಲಾಗುತ್ತದೆ |
ಆಯ್ಕೆ ವಿಧಾನ ಮತ್ತು ಪರೀಕ್ಷಾ ಮಾದರಿ
- ಪರೀಕ್ಷಾ ಮಾದರಿ: Offline OMR
- ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಧಾರವಾಡ, ಕಲಬುರ್ಗಿ
Paper-1
- ಸಾಮಾನ್ಯ ಜ್ಞಾನ
- 300 ಅಂಕ
- 2 ಗಂಟೆ
Paper-2
- ತಾಂತ್ರಿಕ ವಿಷಯ
- 300 ಅಂಕ
- 2 ಗಂಟೆ
Negative Marking
- ತಪ್ಪು ಉತ್ತರ ಅಥವಾ ಖಾಲಿ ಬಿಟ್ಟ ಪ್ರಶ್ನೆಗೆ 0.75 ಅಂಕ ಕಡಿತ
- ಕೊನೆಯ 5 ನಿಮಿಷದಲ್ಲಿ ಖಾಲಿ ಉತ್ತರಗಳಿಗೆ 5ನೇ ವೃತ್ತ shade ಮಾಡಲು ಅವಕಾಶ
ಕನ್ನಡ ಭಾಷಾ ಪರೀಕ್ಷೆ
SSLC ಯಲ್ಲಿ ಕನ್ನಡ ಓದದ ಅಭ್ಯರ್ಥಿಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದೆ.
- 150 ಅಂಕ
- ಕನಿಷ್ಠ 50 ಅಂಕ ಕಡ್ಡಾಯ
- ಮೆರಿಟ್ ಪಟ್ಟಿಗೆ ಪರಿಗಣಿಸಲಾಗುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಅಧಿಕೃತ KEA ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
OFFICAIL NOTIFICATION:CLICK HERE
KEA Recruitment 2026 Update FAQ
1) KEA Recruitment 2026 ನಲ್ಲಿ ಯಾವ ಯಾವ ಹುದ್ದೆಗಳಿವೆ?
ಈ ನೇಮಕಾತಿಯಲ್ಲಿ Assistant Engineer (Civil, Mechanical, Computer Science) ಹಾಗೂ Assistant Executive Engineer ಹುದ್ದೆಗಳಿವೆ.
2) KEA Recruitment 2026 ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು?
ಅಭ್ಯರ್ಥಿಗಳು 04 ಜೂನ್ 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
3) KEA Recruitment 2026 ಗೆ ಯಾರು ಅರ್ಜಿ ಹಾಕಬಹುದು?
BE/BTech (Civil, Mechanical, Computer Science) ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
4) KEA Recruitment 2026 ಪರೀಕ್ಷಾ ವಿಧಾನ ಹೇಗಿರುತ್ತದೆ?
ಪರೀಕ್ಷೆ Offline OMR ಮಾದರಿಯಲ್ಲಿ ನಡೆಯುತ್ತದೆ. General Knowledge ಮತ್ತು Technical Subject ಎಂಬ ಎರಡು ಪತ್ರಿಕೆಗಳು ಇರುತ್ತವೆ.
5) KEA Recruitment 2026 Salary ಎಷ್ಟು?
ಹುದ್ದೆಯ ಪ್ರಕಾರ ₹53,250 ರಿಂದ ₹1,55,200 ವರೆಗೆ ವೇತನ ನೀಡಲಾಗುತ್ತದೆ.
ಸೂಚನೆ: ಅರ್ಜಿ ಸಲ್ಲಿಸುವ ಮೊದಲು ದಯವಿಟ್ಟು ಅಧಿಕೃತ ಅಧಿಸೂಚನೆಯನ್ನು ಜಾಗರೂಕತೆಯಿಂದ ಓದಿರಿ.



